ದೀಕ್ಷಿತ್ ಶೆಟ್ಟಿ ಒಬ್ಬ ಭಾರತೀಯ ಚಲನಚಿತ್ರ ಮತ್ತು ಕಿರುತೆರೆ ನಟ, ಇವರು ಪ್ರಧಾನವಾಗಿ ಕನ್ನಡ ಮತ್ತು ತೆಲುಗು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ಅವರು ದಿಯಾ (2020), ದಸರಾ (2023) ಮತ್ತು ಬ್ಲಿಂಕ್ (2024) ಚಲನಚಿತ್ರಗಳಿಂದ ಮತ್ತು ನಾಗಿಣಿ ಧಾರಾವಾಹಿಯಿಂದ ಹೆಸರುವಾಸಿಯಾಗಿದ್ದಾರೆ. ಇವರು ತಮ್ಮ ಪ್ರಯೋಗಾತ್ಮಕ ಪಾತ್ರಗಳು ಮತ್ತು ಚಲನಚಿತ್ರಗಳಿಂದ ಹೆಸರುವಾಸಿಯಾಗಿದ್ದಾರೆ. == ವೃತ್ತಿ == ದೀಕ್ಷಿತ್ 2016 ರಲ್ಲಿ ಪ್ರೀತಿ ಎಂದರೇನು ಮತ್ತು ಸಾಕ್ಷಿ ಧಾರಾವಾಹಿಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ದೀಪಿಕಾ ದಾಸ್ ಜೊತೆಗೆ ನಟಿಸಿದ ನಾಗಿಣಿ ಇಂದ ಖ್ಯಾತಿ ಪಡೆದರು. ಅವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ಭಾಗವಹಿಸಿದರು ಮತ್ತು ದೀಪಿಕಾ ದಾಸ್ ಅವರೊಂದಿಗೆ ವಿಜೇತರಾಗಿ ಹೊರಹೊಮ್ಮಿದರು. ಅವರು 2020 ರ ಚಲನಚಿತ್ರ ದಿಯಾದೊಂದಿಗೆ , ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು. ಅವರು 2022 ರಲ್ಲಿ ಕೆಲವು ಕನ್ನಡ ಕಿರುಚಿತ್ರಗಳಲ್ಲಿ ಕಾಣಿಸಿಕೊಂಡರು. ನಂತರ ಅವರು ಮುಗ್ಗುರು ಮೊನಗಲ್ಲು ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಮತ್ತು ನಂತರ ದಿ ರೋಸ್ ವಿಲ್ಲಾದಲ್ಲಿ ನಟಿಸಿದರು. ಆದರೂ, ತೆಲುಗಿನಲ್ಲಿ ನಾನಿ ಮತ್ತು ಕೀರ್ತಿ ಸುರೇಶ್ ಜೊತೆಯಲ್ಲಿ ನಟಿಸಿದ ದಸರಾ ಚಿತ್ರದ ಮೂಲಕ ಅವರು ಪ್ರಸಿದ್ಧರಾದರು . ಅವರು ನಾನಿ ಬೆಂಬಲದೊಂದಿಗೆ ಆಂಥಾಲಜಿ ಸರಣಿಯಾದ ಮೀಟ್ ಕ್ಯೂಟ್‌ನಲ್ಲಿಯೂ ಕಾಣಿಸಿಕೊಂಡರು. ಅವರ ಮುಂದಿನ ಚಿತ್ರ "ಕೆ ಟಿ ಎಂ" 2024 ರಲ್ಲಿ ಬಿಡುಗಡೆಯಾಯಿತು. ಇದು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು, ಆದರೆ ಶೆಟ್ಟಿ ಅವರ ಅಭಿನಯವನ್ನು ಪ್ರಶಂಸಿಸಲಾಯಿತು. ಮುಂದಿನ ಚಿತ್ರ ಬ್ಲಿಂಕ್ , ಒಂದು ತಿಂಗಳೊಳಗೆ ಬಿಡುಗಡೆಯಾಯಿತು, ಇದು ಈಡಿಪಸ್ ಕಥೆಯೊಂದಿಗೆ ಪ್ರಯೋಗಾತ್ಮಕ ಸೈನ್ಸ್-ಫಿಕ್ಷನ್ ಚಲನಚಿತ್ರವಾಗಿದ್ದು, ಇದು ಒಳ್ಳೆಯ ವಿಮರ್ಶೆಗಳನ್ನು ಪಡೆದುಕೊಂಡಿತು. == ಚಿತ್ರಗಳು == === ಚಲನಚಿತ್ರಗಳು === === ಕಿರು ಚಿತ್ರಗಳು === === ಕಿರುತೆರೆ === == ಪುರಸ್ಕಾರಗಳು == == ಉಲ್ಲೇಖಗಳು ==